ಕಳ್ಳಿ ಇವಳು ಅಯ್ಯೊ ಕಳ್ಳಿ ಇವಳು

ನನ್ನ ಕೊಂದೆ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ

ಮಳ್ಳಿ ಇವಳು ಬಲು ಮಳ್ಳಿ ಇವಳು

ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬಾ ಹಿಡಿಸಿ

ಅಯ್ಯೊ ಮೂಗನೇನೊ ಇವನು ಬಾಯಿ ಬಿಡನು

ನನ್ನ ಪ್ರೀತಿ ಮಾಡೊ ವಿಷಯ

ನನಗೂ ಹೇಳೊಕು ಹೆದರುವ

ಕಳ್ಳನಿವನು ಅಯ್ಯೊ ಕಳ್ಳನಿವನು

ನನ್ನ ಕದ್ದೆಬಿಟ್ಟನು ನನ್ನನ್ನೆ ಯಾಮಾರಿಸಿ

ಇಷ್ಟ ಇವನು ನಂಗು ಇಷ್ಟ ಇವನು

ನನ್ನ ಮುಂದೆ ಬಂದು ನಿಲ್ಲೊ ಧೈರ್ಯ ಇಲ್ಲದವನು

ಸೈಕಲ್ ಸವಾರ ಪ್ರೀತಿ ಫಕೀರ

ಹೃದಯದ ಚೋಳಿಗೆ ಇಳಿದನು

ಮನೆಯ ಹಜಾರ ದಾಟಿ ಮನಸಾರ

ಹೃದಯವ ಗುಟ್ಟಾಗಿ ಎಸೆದಿಹನು

ಮನೆಕಡೆ ಯಾತಕೊ ಹೋದೆರಿ

ಹೃದಯವನೆಸದಳು ಚೋಕರಿ

ಜನುಮಕು ಕಾಯುವೆನು ನನ್ನಾಣೆರಿ

ನಾನೆ ನನ್ನಲ್ಲಿ ಇಲ್ಲ ಯಾಕಿಲ್ಲಿ

ನನಗೆ ನಾನೀಗ ಹೊಸಬನಾ

ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ

ನನ್ನೆ ನಾನು ನೋಡುವೆ ಪ್ರತಿದಿನ

ಇವನನು ನೋಡಿದ ಕೂಡಲೆ

ಹರಡಿತು ಪ್ರೀತಿಯ ಖಾಯಿಲೆ

ಹರುಷಕೆ ಸಾಯುವೆನು ನನ್ನಾಣೆರಿ

ಪ್ರೇಮ್ ಅಡ್ಡ

ಚಿತ್ರ ನೋಡಿ